Surprise Me!

News Cafe | ಬೆಳಗಾವಿ ಬಳಿಕ ಬಿಜೆಪಿಗೆ ಮೈಸೂರು ಸೋಲಿನ ಶಾಕ್ | June 19, 2022

2022-06-19 2 Dailymotion

ಬಿಜೆಪಿಗೆ ಬೆಳಗಾವಿ ಬಳಿಕ ಈಗ ಮೈಸೂರು ಸೋಲಿನ ಶಾಕ್ ಆಗಿದೆ. ದಕ್ಷಿಣ ಪದವೀಧರ ಕ್ಷೇತ್ರ ಸೋಲನ್ನು ಗಂಭೀರವಾಗಿ ಹೈಕಮಾಂಡ್ ಪರಿಗಣಿಸಿದೆ. ಪರಿಷತ್ ಎಲೆಕ್ಷನ್ ಸೋಲಿಗೆ ವರಿಷ್ಠರು ವಾರ್ನಿಂಗ್ ಕೊಟ್ಟಿದ್ದಾರೆ. ದಕ್ಷಿಣ ಪದವೀಧರ ಚುನಾವಣೆಯಲ್ಲಾದ ಸೋಲಿನಿಂದದ ಬಿಜೆಪಿ ಪಾಳಯ ಕಂಗಾಲಾಗಿದೆ. ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲುಂಡು ಹತಾಶೆ ಆಗಿದೆ. ಇತ್ತೀಚಿಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಚುರುಕುಗೊಂಡಿತ್ತು.. ಇದೇ ವಿಶ್ವಾಸದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಗೆಲುವು ನಿರೀಕ್ಷೆ ಠುಸ್ ಆಗಿದೆ. ಈಗ ಸೋಲಿನ ಪರಾಮರ್ಶೆಗೆ ಇಳಿದಿರುವ ಕಮಲ ಪಡೆ ಹೈಕಮಾಂಡ್‍ಗೆ ಸೋಲಿನ ಕಾರಣಗಳ ಕುರಿತು ಸಂಪೂರ್ಣ ವರದಿ ಕಳಿಸಲು ಸಿದ್ದತೆ ನಡೆಸಿದೆ. ಆದ್ರೆ, ದಕ್ಷಿಣ ಪದವೀಧರ ಪರಿಷತ್ ಚುನಾವಣೆಯಲ್ಲಿ ಸೋಲಾಗಿದ್ದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದ್ದು.. ಗೆಲ್ಲೋ ಚುನಾವಣೆಯಲ್ಲಿ ಸೋಲಾಗಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ. ಮೈಸೂರು ಭಾಗದ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆಗೆ ಅಧ್ಯಕ್ಷ ನಡ್ಡಾ ಕಿಡಿ ಕಾರಿದ್ದಾರೆ. ಇನ್ಮುಂದೆ ಇದೆಲ್ಲ ಸಹಿಸಲ್ಲ, ಜಿ.ಪಂ. ತಾಪಂ ಚುನಾವಣೆಯಲ್ಲಿ ಇದು ಮರುಕಳಿಸಿದ್ರೆ ಹುಷಾರ್ ಎಂದು ವಾರ್ನಿಂಗ್ ಕೊಟ್ಟು ನಡ್ಡಾ ವಾಪಾಸಾಗಿದ್ದಾರೆ ಎನ್ನಲಾಗ್ತಿದೆ.<br /><br />#publictv #newscafe #bjp

Buy Now on CodeCanyon